ಇಂದು ಬೆಳಿಗ್ಗೆ ಚಿದುವಿನ ಅಪ್ಪ ಊರಿನಿಂದ ಬಂದಿದ್ದರು.
ಅವರು ಊರಿಂದ ಬಂದಾಗಲೆಲ್ಲ ಏನಾದರೂ ವಿಶೇಷವಾಗಿ ತರುತ್ತಿದ್ದರು.
ಕೆಲವು ಸಲ ಹಣ್ಣು,
ಕೆಲವು ಸಲ ಸಿಹಿ ತಿನಿಸು
ಕೆಲವು ಸಲ ಹಣ್ಣು,
ಕೆಲವು ಸಲ ಸಿಹಿ ತಿನಿಸು
ಇನ್ನೂ ಕೆಲವು ಸಲ ಯಾವುದಾದರೂ ಚಿಕ್ಕ ಉಡುಗೊರೆ ತರುತ್ತಿದ್ದರು.
ಕೆಲವು ಸಲ ಅಪ್ಪ ಊರಿನ ಹೆಸರನ್ನು ನೇರವಾಗಿ ಹೇಳುತ್ತಿರಲಿಲ್ಲ.
“ಒಂದು ಒಗಟು ಬಿಡಿಸು. ಅದರೊಳಗೆ ಊರಿನ ಹೆಸರು ಅಡಗಿದೆ,” ಎಂದು ಚಿದುವಿಗೆ ಹೇಳುತ್ತಿದ್ದರು.
“ಒಂದು ಒಗಟು ಬಿಡಿಸು. ಅದರೊಳಗೆ ಊರಿನ ಹೆಸರು ಅಡಗಿದೆ,” ಎಂದು ಚಿದುವಿಗೆ ಹೇಳುತ್ತಿದ್ದರು.
ಈ ಸಲವೂ ಅಪ್ಪನ ಮುಖದಲ್ಲಿ ಅದೇ ಒಗಟಿನ ನಗು ಇತ್ತು.
ಅಪ್ಪ ತಿಂಡಿ ತಿಂದ ನಂತರ, ಚಿದು ಅಪ್ಪನ ಬಳಿ ಹೋಗಿ,
"ಅಪ್ಪ ಈ ಸಲ ನನಗಾಗಿ ಏನು ತಂದಿದ್ದೀರಿ?”, ಎಂದು ಚಿದು ಉತ್ಸಾಹದಿಂದ ಕೇಳಿದ.
"ಅಪ್ಪ ಈ ಸಲ ನನಗಾಗಿ ಏನು ತಂದಿದ್ದೀರಿ?”, ಎಂದು ಚಿದು ಉತ್ಸಾಹದಿಂದ ಕೇಳಿದ.
ಅಪ್ಪ ನಗುತ್ತಾ,
"ಕೆಲವು ಒಗಟುಗಳನ್ನು ಬಿಡಿಸು. ಆಗ ನಿನಗೇ ಗೊತ್ತಾಗುತ್ತದೆ, ನಾನು ನಿನಗಾಗಿ ಏನು ತಂದಿದ್ದೇನೆ ಅಂತ,” ಎಂದರು.
“ಬೇಗ ಒಗಟು ಹೇಳಿ ಅಪ್ಪ!", ಎಂದ ಚಿದು.
"ಮೊದಲನೆಯ ಒಗಟು:
ಊರೆಲ್ಲ ಸುತ್ತಿ,
ಮನೆ ಮೂಲೆಯಲ್ಲಿ ಕೂರುತ್ತೆ.
ನಾನು ಯಾರು?”, ಎಂದರು ಅಪ್ಪ
ಊರೆಲ್ಲ ಸುತ್ತಿ,
ಮನೆ ಮೂಲೆಯಲ್ಲಿ ಕೂರುತ್ತೆ.
ನಾನು ಯಾರು?”, ಎಂದರು ಅಪ್ಪ
ಚಿದು ಸ್ವಲ್ಪ ಹೊತ್ತು ಯೋಚಿಸಿದ.
“ಸ್ಕೂಟರ್!” ಎಂದು ಖುಷಿಯಿಂದ ಹೇಳಿದ.
“ಅದು ಕೂಡ ಸರಿಯೇ ಚಿದು.
ಈ ಒಗಟಿಗೆ ಒಂದಕ್ಕಿಂತ ಹೆಚ್ಚು ಉತ್ತರ ಇದೆ.”, ಎಂದರು ಅಪ್ಪ.
“ಸರಿ, ನಾನು ಒಗಟನ್ನು ಸ್ವಲ್ಪ ಬದಲಾಯಿಸುತ್ತೇನೆ.
ಈಗ ಕೇಳು,” ಎಂದರು ಅಪ್ಪ.
“ಅವಳಿ ಜವಳಿ ನಾವು,
ಕಾಲಿನ ಗೆಳೆಯರು ನಾವು,
ಕಲ್ಲು ಮುಳ್ಳಿನಿಂದ ಪಾದಗಳನ್ನು ಕಾಪಾಡುವೆವು.
ಹೇಳು ಚಿದು, ನಾವು ಯಾರು?”, ಎಂದರು ಅಪ್ಪ.
ಥಟ್ ಅಂತ ಚಿದು "ಚಪ್ಪಲಿ" ಎಂದ.
“ಸರಿಯಾದ ಉತ್ತರ!” ಎಂದು ಅಪ್ಪ ಖುಷಿಯಿಂದ ಹೇಳಿದರು.
“ಈ ಉತ್ತರದ ಮೊದಲ ಅಕ್ಷರವನ್ನು ಬರೆದುಕೋ ಚಿದು,” ಎಂದರು ಅಪ್ಪ.
ಚ
"ಮುಂದಿನ ಒಗಟು:
ಜೇಬಿನಲ್ಲಿ ಇದ್ದರೆ ಖುಷಿ,
ಅಂಗಡಿಯಲ್ಲಿ ನನಗೆ ಕೆಲಸ.
ಕಾಗದ ರೂಪದಲ್ಲೂ ಇರುತ್ತೇನೆ,
ನಾಣ್ಯವಾಗಿಯೂ ಇರುತ್ತೇನೆ.
ನಾನು ಯಾರು?” ಎಂದರು.
ಚಿದು ಕೆನ್ನೆಯ ಮೇಲೆ ಕೈ ಇಟ್ಟು ಸ್ವಲ್ಪ ಯೋಚಿಸಿದ.
“ದುಡ್ಡು!” ಎಂದ.
"ಹೌದು, ಸರಿಯಾದ ಉತ್ತರ ಚಿದು", ಎಂದರು ಅಪ್ಪ.
ಚಿದು ಖುಷಿಯಿಂದ, “ಮೊದಲ ಅಕ್ಷರ ‘ದು’!” ಎಂದ.
"ಮುಂದಿನ ಒಗಟು:
ಮನೆಯ ಮುಂದೆ
ಬಣ್ಣ ಬಣ್ಣದ ಚುಕ್ಕಿ ಚಿತ್ತಾರ.
ನಾನು ಯಾರು?”, ಎಂದು ಕೇಳಿದರು ಅಪ್ಪ.
“ಇದು ನನಗೆ ಗೊತ್ತು. ತುಂಬಾ ಸುಲಭ!” ಎಂದು ಚಿದು ಕುಣಿಯುತ್ತಾ ಹೇಳಿದ.
“ರಂಗೋಲಿ!”
“ಮೊದಲ ಅಕ್ಷರ ‘ರಂ’!” ಎಂದ.
“ಸರಿ, ಈಗ ಕೊನೆಯ ಒಗಟು,” ಎಂದರು ಅಪ್ಪ.
“ಮುಖವಿದೆ ಆದರೆ ಕಣ್ಣುಗಳಿಲ್ಲ,
ಮುಳ್ಳುಗಳಿವೆ ಆದರೆ ಚುಚ್ಚುವುದಿಲ್ಲ,
ಸಮಯವನ್ನು ನಾನು ತೋರಿಸುವೆ.
ಹೇಳು ಚಿದು, ನಾನು ಯಾರು?”, ಎಂದು ಅಪ್ಪ ನಕ್ಕರು.
ಚಿದು ತಲೆಯ ಮೇಲೆ ಕೈ ಇಟ್ಟು ಸ್ವಲ್ಪ ಯೋಚಿಸಿದ.
“ಆ… ಗೊತ್ತಾಯಿತು! ಗಡಿಯಾರ!” ಎಂದ.
“ಗ", ಎಂದು ಬರೆದ ಚಿದು.
“ಈಗ ನೀನು ಬರೆದ ಎಲ್ಲಾ ಅಕ್ಷರಗಳನ್ನು ಒಂದಾಗಿ ಸೇರಿಸಿ ಹೇಳು,” ಎಂದರು ಅಪ್ಪ.
“ಚ… ದು… ರಂ… ಗ…” ಎಂದು ಚಿದು ನಿಧಾನವಾಗಿ ಓದಿದ.
ಅವನು ಅಕ್ಷರಗಳನ್ನು ಮತ್ತೆ ಒಟ್ಟಿಗೆ ಸೇರಿಸಿದ.
“ಚದುರಂಗ!” ಎಂದು ಖುಷಿಯಿಂದ ಕೂಗಿದ.
“ಚದುರಂಗ ಅಂದರೆ ಚೆಸ್ ಆಟಕ್ಕೆ ಕನ್ನಡದ ಹೆಸರು, ಚಿದು,” ಎಂದರು ಅಪ್ಪ.
“ನಾನು ತಂದಿರುವುದು ಸಾಮಾನ್ಯ ಚೆಸ್ ಬೋರ್ಡ್ ಅಲ್ಲ.
ಇದು ಚನ್ನಪಟ್ಟಣದ ಮರದ ಚದುರಂಗದ ಮಣೆ.
ಇದನ್ನು ಕುಶಲಕರ್ಮಿಗಳು ಕೈಯಿಂದ ಮಾಡುತ್ತಾರೆ,” ಎಂದರು ಅಪ್ಪ.
“ಕುಶಲಕರ್ಮಿಗಳು ಅಂದರೆ?” ಎಂದು ಚಿದು ಕೇಳಿದ.
“ತಮ್ಮ ಕೈಯಿಂದ ಸುಂದರವಾದ ಆಟದ ಸಾಮಾನು ಮಾಡುವವರು,” ಎಂದರು ಅಪ್ಪ.
ಚಿದು ಮಣೆಯನ್ನು ನಿಧಾನವಾಗಿ ತೆರೆದ.
ಒಳಗೆ ಎರಡು ಬಣ್ಣದ ಚದುರಂಗದ ಮರದ ಕಾಯಿಗಳು ಮಿನುಗುತ್ತಿದ್ದವು.
“ಅಪ್ಪ, ಇವನ್ನೂ ಕೈಯಿಂದ ಮಾಡಿದ್ದಾರಾ?” ಎಂದು ಚಿದು ಆಶ್ಚರ್ಯದಿಂದ ಕೇಳಿದ.
“ಹೌದು ಚಿದು", ಎಂದರು ಅಪ್ಪ.
ಚಿದು ಚದುರಂಗದ ಮಣೆಯನ್ನು ಖುಷಿಯಿಂದ ಹಿಡಿದುಕೊಂಡ.
ಅಪ್ಪನ ಕೆನ್ನೆಗೆ ಮುತ್ತಿಟ್ಟು, ಆಟ ಆಡಲು ಓಡಿದ.








ಚಿಕ್ಕ ಮಕ್ಕಳಿಗೆ ಚೊಕ್ಕವಾಗಿ ಬರೆದಿದ್ದೀರಾ. ಕನ್ನಡದಲ್ಲಿ ಇಂತಹ ಬರವಣಿಗೆಗಳ ಅಗತ್ಯ ಹೆಚ್ಚಾಗಿ ಇದೆ!
ReplyDeleteತುಂಬ ಧನ್ಯವಾದಗಳು. ನಿಮ್ಮ ಮಾತುಗಳು ನನಗೆ ತುಂಬ ಪ್ರೋತ್ಸಾಹ ನೀಡಿದೆ.
Deleteತುಂಬಾ ಚನ್ನಾಗಿದೆ.
ReplyDeleteತುಂಬ ಧನ್ಯವಾದಗಳು. ನಿಮ್ಮ ಸಹಾಯದಿಂದ ಕನ್ನಡದಲ್ಲಿ ಕಥೆ ಬರೆಯಲು ನನಗೆ ತುಂಬ ನೆರವಾಯಿತು.
Deleteಮಕ್ಕಳಿಗಾಗಿ ತುಂಬಾ ಚೆನ್ನಾದ ಕಥೆ.
Deleteಅದ್ಭುತವಾದ ಬರವಣಿಗೆ, ಹೀಗೆ ಮುಂದುವರಿಸಿ ಸಂಧ್ಯಾ
ತುಂಬ ಧನ್ಯವಾದಗಳು. ನಿಮ್ಮ ಮಾತುಗಳು ನನಗೆ ತುಂಬ ಪ್ರೋತ್ಸಾಹ ನೀಡಿದೆ.
ReplyDelete