Skip to main content

Posts

Showing posts from 2026

ಅಪ್ಪ ತಂದ ಒಗಟಿನ ಉಡುಗೊರೆ

 ಇಂದು ಬೆಳಿಗ್ಗೆ ಚಿದುವಿನ ಅಪ್ಪ ಊರಿನಿಂದ ಬಂದಿದ್ದರು. ಅವರು ಊರಿಂದ ಬಂದಾಗಲೆಲ್ಲ ಏನಾದರೂ ವಿಶೇಷವಾಗಿ ತರುತ್ತಿದ್ದರು. ಕೆಲವು ಸಲ ಹಣ್ಣು, ಕೆಲವು ಸಲ ಸಿಹಿ ತಿನಿಸು ಇನ್ನೂ ಕೆಲವು ಸಲ ಯಾವುದಾದರೂ ಚಿಕ್ಕ ಉಡುಗೊರೆ ತರುತ್ತಿದ್ದರು. ಕೆಲವು ಸಲ ಅಪ್ಪ ಊರಿನ ಹೆಸರನ್ನು ನೇರವಾಗಿ ಹೇಳುತ್ತಿರಲಿಲ್ಲ. “ಒಂದು ಒಗಟು ಬಿಡಿಸು. ಅದರೊಳಗೆ ಊರಿನ ಹೆಸರು ಅಡಗಿದೆ,” ಎಂದು ಚಿದುವಿಗೆ ಹೇಳುತ್ತಿದ್ದರು. ಈ ಸಲವೂ ಅಪ್ಪನ ಮುಖದಲ್ಲಿ ಅದೇ ಒಗಟಿನ ನಗು ಇತ್ತು. ಅಪ್ಪ ತಿಂಡಿ ತಿಂದ ನಂತರ, ಚಿದು ಅಪ್ಪನ ಬಳಿ ಹೋಗಿ, "ಅಪ್ಪ ಈ ಸಲ ನನಗಾಗಿ ಏನು ತಂದಿದ್ದೀರಿ?”, ಎಂದು ಚಿದು ಉತ್ಸಾಹದಿಂದ ಕೇಳಿದ.  ಅಪ್ಪ ನಗುತ್ತಾ, "ಕೆಲವು ಒಗಟುಗಳನ್ನು ಬಿಡಿಸು. ಆಗ ನಿನಗೇ ಗೊತ್ತಾಗುತ್ತದೆ, ನಾನು ನಿನಗಾಗಿ ಏನು ತಂದಿದ್ದೇನೆ ಅಂತ,” ಎಂದರು. “ಬೇಗ ಒಗಟು ಹೇಳಿ ಅಪ್ಪ!", ಎಂದ ಚಿದು. "ಮೊದಲನೆಯ ಒಗಟು:  ಊರೆಲ್ಲ ಸುತ್ತಿ, ಮನೆ ಮೂಲೆಯಲ್ಲಿ ಕೂರುತ್ತೆ. ನಾನು ಯಾರು?”, ಎಂದರು ಅಪ್ಪ ಚಿದು ಸ್ವಲ್ಪ ಹೊತ್ತು ಯೋಚಿಸಿದ. “ಸ್ಕೂಟರ್!” ಎಂದು ಖುಷಿಯಿಂದ ಹೇಳಿದ. “ಅದು ಕೂಡ ಸರಿಯೇ ಚಿದು. ಈ ಒಗಟಿಗೆ ಒಂದಕ್ಕಿಂತ ಹೆಚ್ಚು ಉತ್ತರ ಇದೆ.”, ಎಂದರು ಅಪ್ಪ. “ಸರಿ, ನಾನು ಒಗಟನ್ನು ಸ್ವಲ್ಪ ಬದಲಾಯಿಸುತ್ತೇನೆ. ಈಗ ಕೇಳು,” ಎಂದರು ಅಪ್ಪ. “ಅವಳಿ ಜವಳಿ ನಾವು, ಕಾಲಿನ ಗೆಳೆಯರು ನಾವು, ಕಲ್ಲು ಮುಳ್ಳಿನಿಂದ ಪಾದಗಳನ್ನು ಕಾಪಾಡುವೆವು. ಹೇಳು ಚಿದು, ನಾವು ಯಾರು?”...

ಸ್ಮಿತಾ ಮತ್ತು ಅಜ್ಜಿಯ ತೋಟ

  ಬೇಸಿಗೆ ರಜೆಯಲ್ಲಿ ಸ್ಮಿತಾ , ಅಜ್ಜಿ - ತಾತನ ಮನೆಗೆ ಬಂದಿದ್ದಳು . ಅಜ್ಜಿಯ ತೋಟದಲ್ಲಿ ನಾನಾ ಬಗೆಯ ಗಿಡಗಳನ್ನು ಕಂಡಳು . ಉದ್ದದ ಗಿಡಗಳು . ಸಣ್ಣ ಗಿಡಗಳು . ಹೂವಿನ ಗಿಡಗಳು . ನೇರಳೆ ಎಲೆಗಳ ಗಿಡಗಳು . ಸ್ಮಿತಾ ಗಿಡಗಳನ್ನು ಆಶ್ಚರ್ಯದಿಂದ ನೋಡುತ್ತಾ ನಿಂತಳು . “ ಗಿಡ ಹೇಗೆ ಬೆಳೆಯುತ್ತೆ ?” ಎಂದು ಮನದಲ್ಲೇ ಯೋಚಿಸಿದಳು . ಮರುದಿನ ತಿಂಡಿ ತಿಂದ ನಂತರ , “ ಬಾ ಸ್ಮಿತಾ , ಬೀಜ ಗಳನ್ನು ನೆಡೋಣ ", ಎಂದರು ಅಜ್ಜಿ . “ ಸರಿ , ಸರಿ ," ಎಂದು ಕುಣಿಯುತ್ತ ಸ್ಮಿತಾ ಅಜ್ಜಿಯ ಹಿಂದೆ ಓಡಿದಳು . ಅಜ್ಜಿ ಮತ್ತು ಸ್ಮಿತಾ ಮಣ್ಣಲ್ಲಿ ಚಿಕ್ಕ ಚಿಕ್ಕ ಗುಳಿಗಳನ್ನು ತೊಡಿದರು . ಅಜ್ಜಿ ಸ್ಮಿತಾಳ ಕೈಯಲ್ಲಿ ಕೊತ್ತಂಬರಿ ಬೀಜಗಳನ್ನು ಇಟ್ಟು , “ ಒಂದೊಂದು ಬೀಜವನ್ನು ಒಂದೊಂದು ಗುಳಿಯಲ್ಲಿ ಇಡು ,” ಎಂದರು . ಸ್ಮಿತಾ ನಿಧಾನವಾಗಿ ಒಂದೊಂದೇ ಬೀಜವನ್ನು ಗುಳಿಗಳಲ್ಲಿ ಇಟ್ಟಳು . ಅಜ್ಜಿ ಇನ್ನೂ ಸ್ವಲ್ಪ ಬೀಜಗಳನ್ನು ಕೊಟ್ಟು , “ ಇವು ಪಾಲಕ್ ಸೊಪ್ಪಿನ ಬೀಜಗಳು . ಇವುಗಳನ್ನು ಉಳಿದ ಗುಳಿಗಳಲ್ಲಿ ಇಡು ,” ಎಂದರು . ಸ್ಮಿತಾ ಎಲ್ಲಾ ಬೀಜಗಳನ್ನು ಇಟ್ಟಮೇಲೆ , “ ಈಗ ಅವುಗಳ ಮೇಲೆ ನಿಧಾನವಾಗಿ ಮಣ್ಣು ಹಾಕು ,” ಎಂದರು ಅಜ್ಜಿ . ಸ್ಮಿತಾ ಚಿಕ್ಕ ಕೈಗಳಿಂದ ನಿಧಾನವಾಗಿ ಮಣ್ಣು ಹಾಕಿದಳು . ಅಜ್ಜಿ ಚಿಕ್ಕ ನೀರು ಸಿಂಪಡಿಸುವ ಬಾಟಲಿ ಕೊಟ್ಟು “ ಸ್ವಲ್ಪ ನೀರು ಹಾಕು ," ಎಂದರು . ಪಸ್ ... ಪಸ್ ... ಪಸ್ ... ಎಂದು ನೀರು ಸಿಂಪಡ...

Unlearning the Wild: How Captivity Rewrites an Elephant

 “The strongest body can still kneel, not because it is weak,  but because it was trained to forget what freedom feels like.” — Anonymous  Imagine being chained so you can only take a step or two. Imagine constant noise, drums, traffic, crowds, shouting day after day. Imagine being made to work for long hours until discomfort becomes “normal” and pain becomes background. Now imagine living that life not for a week, not for a festival season, but for decades. That picture is hard to sit with. Yet it describes the lived reality of many captive elephants across Asia (and in some places beyond Asia too). Elephants are powerful, intelligent, deeply social beings. The core issue is not that humans and elephants share landscapes; they have coexisted for centuries. The issue is how captivity is created and maintained, and what it costs elephants in body and mind.  By Rudolf Ernst - http://www.filestube.com/6Gveb6baIsdLxqLvPb4QJo/105-Old-India-in-Paintings-Wallpapers-Collecti...